ಈ ಲೇಖನವು ಕೋವಿಡ್‌ನ ಹರಡುವಿಕೆಯನ್ನು ನಿಯಂತ್ರಿಸಲು ವೈಯಕ್ತಿಕ ಅನುಭವ ಮತ್ತು ಅವಲೋಕನಗಳನ್ನು ಆಧರಿಸಿದೆ. ಈ ಮಾಹಿತಿಯು ಸಹಾಯಕವಾಗಿದೆಯೆಂದು ನಾನು ಭಾವಿಸುತ್ತೇನೆ. ದಯವಿಟ್ಟು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ ಮತ್ತು ಈ ಸಂದೇಶವನ್ನು ಹರಡಲು ನನಗೆ ಸಹಾಯ ಮಾಡಿ.
ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿ
◉ ಸ್ವಚ್ಛವಾದ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ
◉ ಅನಗತ್ಯವಾಗಿ ವಸ್ತುಗಳನ್ನು ಮುಟ್ಟದಿರಿ
◉ ಸಾಬೂನಿಂದ ಕೈಗಳು ಮತ್ತು ಮುಖವನ್ನು ತೊಳೆದುಕೊಳ್ಳಿ
◉ ತ್ವರಿತ ಶುದ್ಧೀಕರಣಕ್ಕೆ ಸ್ಯಾನಿಟೈಸರ್ ಬಳಸಿ
◉ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ನೀರು ಬಿಸಿ ಇಲ್ಲದಿದ್ದರೂ ನಡೆಯುತ್ತದೆ
◉ ಬಿಸಿ ಹಬೆಯನ್ನು ತೆಗೆದುಕೊಳ್ಳಿ
◉ ಪ್ರತಿದಿನ ಪ್ರಾಣಾಯಾಮ ಮತ್ತು ವ್ಯಾಯಾಮ ಮಾಡಿ
◉ ಓಂ ಪಠಿಸಿ ಮತ್ತು ಧ್ಯಾನ ಮಾಡಿ
◉ ಪ್ರತಿದಿನ ಬಿಸಿ ಕಶಾಯ / ಖಾಡೆ ಸೇವಿಸಿ
◉ ಆದಷ್ಟು ಹೊರಗಿನ ತಿನಿಸುಗಳಿಂದ ಮತ್ತು ಧೂಮಪಾನದಿಂದ ದೂರವಿರಿ
◉ ದಿನವೂ ಸಸ್ಯಗಳ ಕಾಳಜಿ ಮಾಡುವುದರಲ್ಲಿ ಸ್ವಲ್ಪ ಸಮಯ ಕಳೆಯಿರಿ
◉ ಆಶಾವಾದಿಯಾಗಿರಿ ಮತ್ತು ಸಕಾರಾತ್ಮಕತೆಯನ್ನು ಬೆಳೆಸಿರಿ
⊛ ಕೋವಿಡ್ ರೋಗದ ಲಕ್ಷಣಗಳ ಮತ್ತು ಅದರಿಂದ ಗುಣವಾಗುವ ಬಗ್ಗೆ ತಿಳಿದುಕೊಳ್ಳಿ
⊛ ಮಕ್ಕಳು ಮತ್ತು ವೃದ್ಧರ ಆರೋಗ್ಯವನ್ನು ಆಗಾಗ್ಗೆ ಗಮನಿಸುತ್ತಿರಿ
⊛ ರೋಗಲಕ್ಷಣಗಳು ಕಂಡುಬಂದರೆ, ಬೇಗ ವೈದ್ಯರನ್ನು ಸಂಪರ್ಕಿಸಿ.
ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿ, ನಿಮ್ಮ ಜವಾಬ್ದಾರಿ
.........
No comments:
Post a Comment