Sharing a few sayings commonly heard in and around Dharwad. I guess the meanings are pretty straight forward. Most of us would've faced a situation where these quotes could be applied.
- ಉತ್ತರಕುಮಾರನ ಪೌರುಷ ಒಲಿ ಮುಂದ
- ಎತ್ತ ಏರಿಗೆಳೆದರ ಕೋಣ ನಿರಿಗೆಳಿತಂತ
- ಒಲ್ಲದ ಮನಷ್ಯಾಗ ಮಜ್ಜಿಗ್ಯಾಗೂ ಕಲ್ಲಂತ
- ಕಷ್ಟಕ್ ಕರಿ ಬ್ಯಾಡ ಊಟಕ್ ಮರಿ ಬ್ಯಾಡ
- ಕಾಗಿ ಕುಂದ್ರಕ್ಕೂ ಟೊಂಗಿ ಮುರ್ಯಕ್ಕೂ ಸಮ
- ಕುನ್ಯಾಕ ಬರಲಾರ್ದಕಿ ನೆಲ ಡೊಂಕ ಅಂದ್ಳಂತ
- ಕುಂಬಳಕಾಯಿ ಕಳ್ಳ ಅಂದ್ರ ಹೆಗಲ ಮುಟ್ಟಿ ನೋಡ್ಕೊಂಡ್ರಂತ
- ಕೊಡು ಮಣೆ, ದೂಡು ಮಣೆ, ತೋರು ಮಣೆ
- ಗಣೇಶನ್ ಮಾಡಂದ್ರ, ಅವ್ರ್ ಅಪ್ಪನ್ ಮಾಡಿದ್ನಂತ.
- ತನ್ನ ತಾಟ್ನಾಗ್ ಹೆಗ್ಗಣ ಬಿದ್ದೆತಿ, ನನ್ ತಾಟ್ನಾಗ್ ನೊಣ ಹೊಡ್ಯಾಕ್ ಬಂದಾನ.
- ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ ದಾಸಯ್ಯನ ಗಳಗಂಟಿಗೆ ಹೆದರ್ತೆನೆನ?
- ನಮ್ಮ್ ವಲಿ ಮ್ಯಾಲ ನಿಮ್ಮ್ ಬ್ಯಾಳಿ ಬಿಸ್ಕೊತಿರಿ
- ಮದ್ವಿ ಮಾಡ್ಕೊಳೋ ಬ್ರಾಹ್ಮಣ ಅಂದ್ರೆ, ನೀನೆ ನನ್ ಹೆಂಡ್ತಿ ಅಂತಾನ.
- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
- ಮಾತ ಮನಾರ, ದಗದ ಸುಮಾರ
- ಮಾತ ಮನಿ ಕೆಡ್ಸತಂತ, ತೂತ್ ವಲಿ ಕೆಡ್ಸತಂತ
- ಮಾಡೋದು ಅನಾಚಾರ ಮನಿ ಮುಂದ ಬೃಂದಾವನ
- ಮಳ್ಳಿ ಮಳ್ಳಿ ಮಂಚಕ್ ಕಾಲ ಎಷ್ಟ್ ಅಂದ್ರ, ಮೂರು ಮತ್ತೊಂದು ಅಂದ್ಳಂತ
- ಯಪ್ಪಾ ಯಪ್ಪಾ ಅಂದ್ರ ಯಪ್ಪಂದ್ ಹೋಗಿ ಉಪ್ಪರಗಿಮೆಲ್ ಕುಂತಂಗ
- ಸಾವಿರ ಕುದ್ರಿ ಸರದಾರ ಹೆಂಡಿತಿ ಮುಂದ ಪಿಂಜಾರ
- ಸುಮ್ನ ಇರ್ಲಾರ್ದ ಛಾದ್ಯಗ ಇರಬಿ ಬಿಟ್ಕೊಳೋ ಕೆಲಸ ಮಾಡಿದ್ರಂತ
- ಹಾಡಿದ್ ಹಾಡೊ ಕಿಸಬಾಯಿದಾಸ
- ಹೊತ್ತಲ್ದ ಹೊತ್ತನ್ಯಾಗ ಕತ್ತಿ ಮೈ ನೆರದಿತ್ತಂತ
- ಹೊಸದ್ರಲ್ಲಿ ಅಗಸ ಎತ್ತೆತ್ತಿ ಒಗಾಡಿನಂತ
- ಹೊತ್ತಿ ತುಂಬಿದ್ಮ್ಯಾಲ್ ಹುಗ್ಗಿ ಮುಳ್ಳುಮುಳ್ಳ್
Here's a list of sayings compiled by my friend Dr. Umesh Laddi.
- ಅಕ್ಕ ತಂಗ್ಯಾರು ಕಾಶಿಗೆ ಹೋದಂತೆ
- ಅಲ್ಪನಿಗೆ ಐಶ್ವರ್ಯ ಬಂದರೆ ಹಗಲ್ನಲ್ಲೀ ದೀಪಾ ಹಿಡಿದಿದ್ನಂತ
- ಇದಿ ಕಟ್ಟಕೊಂಡು ಸಮಾಧಿಗೆ ಹೋದಂಗಾತು
- ಉಗುರಿನಲ್ಲಿ ಹೋಗೋದಕ್ಕ ಕೊಡಲಿ ತಗೋಂಡ್ನಂತ
- ಊರ ಉಪಕಾರ ಅರೀದು; ಹೆಣ ಶೃಂಗಾರ ಅರೀದು
- ಕದಾ ತಿನ್ನೋವ್ನಿಗೆ ಹಪ್ಪಳ ಈಡಾ?
- ತಾಮ್ರದ ದುಡ್ಡು ತಾಯಿ ಮಕ್ಕಳನ್ನ ಕೆಡಿಸಿತ್ತು
- ತಾಯಿ ಕಂಡರೆ ತಲೆ ನೋವು
- ದಾನಕ್ಕಕೊಟ್ಟ ಎತ್ತಿನ ಹಲ್ಲ ಎಣಿಸಿದ್ದನಂತ
- ನೆತ್ತಿ ಮ್ಯಾಲಿ ಬಾಯಿ ಇದ್ದಿದ್ದರೆ ಮತ್ತೊಂದು ತುತ್ತು ಉಣ್ಣ್ತದ್ದೆ
- ಬೇಡಿಕೊಂಡು ಬಂದ ಅಕ್ಕಿಯಲ್ಲಿ ಬೆಕ್ಕು ಉಚ್ಚೆ ಹೊಯ್ದಿತ್ತು
- ಬರಗಾಲದಾಗ ಮಗ ಉಣ್ಣಾಕ ಕಲತಾಂಗತು
- ಮಾಡೋವರನ್ನು ಕಂಡರ ನೋಡ ನನ್ನೂ
- ಎಮ್ಮಿ ನೋವು ಕಾಗಿಗೇನ್ ಗೊತ್ತ
- ರೋಣಿ ಮಳೆ ಹೊಯ್ದರೆ ಓಣೆಲ್ಲಾ ಕೆಸರ
- ಸಾಲಿ ಮಾಸ್ತರಿಗೆ ಬುಧ್ಧಿಯಿಲ್ಲ, ಸ್ಟೇಷನ್ ಮಾಸ್ತರಿಗೆ ನಿದ್ದೆಯಿಲ್ಲ
- ಹಾಕು ಮಣೆ, ನೂಕು ಮಣೆ, ತೋರು ಮಣೆ
- ಹೋಗ ಅನ್ನಲಾರದ ಹೊಗಿ ಹಾಕಿದ್ನಂತ
- ಹೊಟ್ಟೆಗಿಲ್ಲದಂಥ ಶಾನುಭೋಗ ಹಳೆ ಕಡತ ತಿರವಿ ಹಾಕಿದ್ನಂತ
- ಹೊಸದರಲ್ಲಿ ಅಗಸ (ಕೌದೀನ್ನೂ) ಗೋಣಿಯನ್ನೂ ಎತ್ತಿ ಎತ್ತಿ ಒಗೆದಿದ್ದ
......
No comments:
Post a Comment